ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್
ರಾಗ: 

ನೀ ನಡೆದರೆ ಸೊಗಸು, ನೀ ನಿಂತರೆಸೊಗಸು
ನೀ ನಡೆದರೆ ಸೊಗಸು, ನೀ ನಿಂತರೆಸೊಗಸು
ನಕ್ಕರೆ ಸೊಗಸು, ಕೋಪದಿ ಸಿಡಿದರೂ ಸೊಗಸು
|| ನೀ ನಡೆದರೆ ಸೊಗಸು||

ಕಂಗಳ ಕಾಡುವ ಸೊಗಸು, ಜೋಡಿಯ ಬೇಡುವ ವಯಸು
ಕಂಗಳ ಕಾಡುವ ಸೊಗಸು, ಜೋಡಿಯ ಬೇಡುವ ವಯಸು
ಹೆಣ್ಣೇ ತೋಳಿಂದ ಬಳಸಿ, ಹೆಣ್ಣೇ ತೋಳಿಂದ ಬಳಸಿ, 
ನನ್ನನು ಕುಣಿಸು ಕುಣಿಸು
|| ನೀ ನಡೆದರೆ ಸೊಗಸು||

ನಿನ್ನನು ನೋಡಿದ ಮನಸು, ಕಂಡಿತು ಸಾವಿರ ಕನಸು
ನಿನ್ನನು ನೋಡಿದ ಮನಸು, ಕಂಡಿತು ಸಾವಿರ ಕನಸು
ಚಿನ್ನಾ ನಾ ತಾಳೆನು ವಿರಹ, ಚಿನ್ನಾ ನಾ ತಾಳೆನು ವಿರಹ
ಬೇಗನೆ ಪ್ರೀತಿಸು ಪ್ರೀತಿಸು
|| ನೀ ನಡೆದರೆ ಸೊಗಸು||ವರ್ಗ:ಡಾ.ರಾಜ್‍ಕುಮಾರ್ ಗಾಯನ